ದಿನಾಂಕ 08/12/2009 ರಂದು ಮದ್ಯಾಹ್ನ 1200 ಗಂಟೆ ಸುಮಾರಿಗೆ ಮಂಗಳೂರು ಜಪ್ಪು ಸೆಮಿನರಿ ವಾಸಿ ಶ್ರೀಮತಿ ಸುಮೆಯ್ಯರವರ 2 ವರ್ಷ ಮಗಳ ಕುತ್ತಿಗೆಯಲ್ಲಿದ್ದ 1 ಪವನ್ನ ಚಿನ್ನದ ಸರವನ್ನು ಹಾಡುಹಗಲೇ ಕುಡಿಯಲು ನೀರು ಕೇಳುವ ನೆಪದಲ್ಲಿ ಕಂಪೌಂಡ್ ಒಳಗೆ ಬಂದ ಇಬ್ಬರು ಮಹಿಳೆಯರು ಶ್ರೀಮತಿ ಸುಮೆಯ್ಯವರಲ್ಲಿ ಕುಡಿಯಲು ನೀರು ಕೇಳಿದಾಗ ಅವರು ನೀರು ತರಲೆಂದು ತಿರುಗಿದ ಸಂದರ್ಭದಲ್ಲಿ ಮಗುವಿನ ಕುತ್ತಿಗೆಯಲ್ಲಿದ್ದ 7.300 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದು ಇದರ ಬೆಲೆ ಸುಮಾರು 12,000/- ರೂಪಾಯಿ ಆಗಿರುತ್ತದೆ. ಈ ಕುರಿತು ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇತ್ತೀಚೆೆಗೆ ಇಂತಹ ಪ್ರಕರಣಗಳು ಮಂಗಳೂರು ನಗರದಲ್ಲಿ ಆಗಾಗ ಪುನರಾವರ್ತನೆ ಯಾಗುತ್ತಿದ್ದು, ಆರೋಪಿಗಳು ಮಹಿಳೆಯರಾಗಿದ್ದರಿಂದ ಹಾಗೂ ಈಗೀಗ ಪರವೂರಿನಿಂದ ಮಂಗಳೂರಿಗೆ ಬಂದು ಹಲವು ನೆಪಗಳಲ್ಲಿ ಮಂಗಳೂರು ನಗರದಲ್ಲಿ ಅಲೆಮಾರಿಗಳಾಗಿ ಜೀವಿಸುವವರ ಸಂಖ್ಯೆಯೂ ಸಹ ಹೆಚ್ಚಾಗಿದ್ದರಿಂದ ಪ್ರಕರಣವನ್ನು ಬೇಧಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
ಆದರೆ ಮಾಹಿತಿಯನ್ನು ಕಲೆಹಾಕಿದ ಡಿಸಿಐಬಿ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣ ನಡೆದು ಕೇವಲ 8 ಗಂಟೆಗಳ ಒಳಗಡೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ರಾತ್ರಿ ರೈಲ್ವೆ ನಿಲ್ದಾಣದ ಸಮೀಪ ಇರುವ ಸ್ಟೇಜ್ನ ಪಕ್ಕದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಚಿನ್ನದ ಸರವನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮಹಿಳೆಯರು ಇಂತಹುದೇ ಹಲವಾರು ಕೃತ್ಯಗಳನ್ನು ಈ ಹಿಂದೆಯೂ ಮಾಡಿರುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ತನಿಖೆ ಮುಂದುವರಿಯುತ್ತಿದ್ದು, ಆರೋಪಿಗಳನ್ನು ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಸಾರ್ವಜನಿಕರು ಇಂತಹ ಮಹಿಳೆಯರ ಬಗ್ಗೆ ನಿಗಾ ಇರಿಸುವಂತೆ ಡಿಸಿಐಬಿ ಇನ್ಸ್ಪೆಕ್ಟರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸುಬ್ರಮಣ್ಯೇಶ್ವರ ರಾವ್ರವರ ಆದೇಶ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಆರ್.ರಮೇಶ್ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಇನ್ಸ್ಪೆಕ್ಟರ್ ಶ್ರೀ. ಹೆಚ್.ಎನ್.ವೆಂಕಟೇಶ್ ಪ್ರಸನ್ನ ಮತ್ತು ಎಎಸ್ಐ ನಾರಾಯಣ ಮಣಿಂಾಣಿ, ಹಾಗೂ ಸಿಬ್ಬಂದಿಯವರಾದ ಸಿಬ್ಬಂದಿಯವರಾದ ಶಶಿಧರ ಶೆಟ್ಟಿ, ಸಂತೋಷ್ ಪಡೀಲ್, ಗಣೇಶ್ ಕಲ್ಲಡ್ಕ, ಧಮರ್ೇಂದ್ರ, ಕುಮಾರ, ಚೇತನ್ ಬೊಟ್ಯಾಡಿ, ಪ್ರಶಾಂತ್, ಗಣೇಶ್ ಮಾನ್ಯ, ಚಂದ್ರ ಅಡೂರು ಮತ್ತು ಮಹಿಳಾ ಸಿಬ್ಬಂದಿ ಪ್ರಮೀಳಾ, ಚಾಲಕರಾದ ಶಾಂತಶೆಟ್ಟಿ ಹಾಗೂ ದೇವಯ್ಯ ರವರುಗಳು ಮೇಲಿನ ಕಾಯರ್ಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ.
To download photo clickhere